ಮರಿಕರ್ ಫಿಲ್ಮ್ಸ್ ಕನ್ನಡಕ್ಕೆ ಲಗ್ಗೆ
Posted date: 15 Thu, Sep 2016 – 09:36:18 AM

ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಮರಿಕರ್ ಫಿಲ್ಮ್ಸ್ ಮಲಯಾಳ ಭಾಷೆಯಲ್ಲಿ ಸೂಪರ್ ಸ್ಟಾರ್ ಮಮ್ಮೂಟ್ಟಿ ಸಿನಿಮಾಗಳನ್ನು ನಿರ್ಮಾಣ ಹಾಗೂ ವಿತರಣೆ ಮಾಡಿದ ಸಂಸ್ಥೆ ಈಗ ಕನ್ನಡ ಸಿನಿಮಾ ತಯಾರಿಸಲು ಮುಂದೆ ಬಂದಿದೆ. ಸೆಪ್ಟೆಂಬರ್ 5, ಗಣೇಶ ಚತುರ್ಥಿ ದಿವಸ ನಗರದ ಬನಶಂಕರಿಯ ದೇವಗಿರಿ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಜನಪ್ರಿಯ ನಟ ಅನೀಶ್ ಮುಖ್ಯ ಭೂಮಿಕೆಯ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ನಡೆಸಲಾಗಿದೆ.

2007 ರಲ್ಲಿ ಶಾಹುಲ್ ಹಮೀದ್ ಮರಿಕರ್ ಹಾಗೂ ಹಶಿಮ್ ಮರಿಕರ್ ಸ್ಥಾಪನೆ ಮಾಡಿದ ನಿರ್ಮಾಣದ ಸಂಸ್ಥೆ   ಮರಿಕರ್ ಫಿಲ್ಮ್ಸ್ ಮೊದಲ ಸಿನಿಮಾ ಬಿಗ್ ಬಿ ಮಮ್ಮೂಟಿ ಅವರ ತಾರಾಗಣದಲ್ಲಿ  ನಿರ್ಮಾಣ ಆದ ಸಿನಿಮಾ, ರೌದ್ರಮ್ ಚಿತ್ರದಿಂದ ವಿತರಣೆ ಸಂಸ್ಥೆ ಸಹ ಸ್ಥಾಪಿಸಿತು. ಅದಾದ ಮೇಲೆ ಅಣ್ಣನ್ ತಂಬಿ, ವಿಲಾಪಾಂಗಲಕ್ಕ್ ಪ್ಪುರಮ್, ಡ್ಯಾಡಿ ಕೂಲ್, ತಂಥೋಮಿ, ಥ್ಯಾಂಕ್ ಯು, ಕೂತರ ಸಿನಿಮಾಗಳ ವಿತರಣೆ ಹಾಗೂ ನಿರ್ಮಾಣವನ್ನು ನಡೆಸಿಕೊಂಡು ಬಂದಿದೆ.

2017 ರ ಜನವರಿಯಲ್ಲಿ ಸೆಟ್ಟೇರುವ ಮರಿಕರ್ ಫಿಲ್ಮ್ಸ್ ಮೊದಲ ಕನ್ನಡ ಸಿನಿಮಾ ಹಶಿಮ್ ಮರಿಕರ್ ಅವರಿಗೆ ಮೊದಲ ಸ್ವತಂತ್ರ ನಿರ್ದೇಶನದ ಕನ್ನಡದ ಚಿತ್ರ.

ಕನ್ನಡದ ಸಿನಿಮಾದ ಜನಪ್ರಿಯ ನಟ ಅನೀಶ್ ಅವರ ಆಯ್ಕೆ ಮಾತ್ರ ಸಧ್ಯಕ್ಕೆ ಆಗಿರುವುದು. ಈ ಸಿನಿಮಾದ ಇತರ ತಾರಗಣದ ಆಯ್ಕೆ ಹಾಗೂ ತಾಂತ್ರಿಕ ತಂಡವನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.

ಇದೊಂದು ಪ್ರವಾಸದಲ್ಲಿ ನಡೆಯುವ ಕಥೆ ಆಗಿರುವುದು ಎಂದು ಚಿತ್ರದ ನಿರ್ಮಾಣ ನಿರ್ವಾಹಕ ಶರತ್ ಅವರು ತಿಳಿಸುತ್ತಾರೆ. ಈ ಚಿತ್ರದ ಸಹ ನಿರ್ಮಾಪಕರಾಗಿ ಡಿಜೊ ಎಂಟರ್ಟೈನ್ಮೇಂಟ್ ಚಂದ್ರಶೇಖರ್, ಎಸ್ ಕೆ ರಾಜ, ಬಿ ಪಿ ವಿನೀತ್ ವೇಣುಗೋಪಾಲ್ ಇದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed